ಇಂದು ಶಾರ್ಜಾದಲ್ಲಿ ನಡೆದ 2ನೇ ಟಿ20 ಯಲ್ಲಿ ವೆಸ್ಟ್ ಇಂಡೀಸ್ ತಂಡ ನೇಪಾಳ್ ತಂಡದ ಸ್ಪಿನ್ ದಾಳಿಗೆ ತತ್ತರಿಸಿ 90 ರನ್ ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನೇಪಾಳ್ ತಂಡ ಮೊದಲ 2 ವಿಕೆಟ್ 14 ರನ್ ಆಗುವಷ್ಟರಲ್ಲಿ ಕಳೆದುಕೊಂಡಿತು ಆದರೆ ಆಸಿಫ್ ಶೇಕ್ ಮತ್ತೆ ಸುಂದೀಪ್ ಜೋರ ಅವರ ಹೊಡಿ ಬಡಿ ಆಟದಿಂದ ತಂಡದ ಮೊತ್ತವನ್ನು 170 ರ ಗಡಿ ದಾಟಿಸುವಲ್ಲಿ ಸಫಲರದರು. ಆಸಿಫ್ ಶೇಕ್ ಅವರು 47 ಬಾಲ್ ಅಲ್ಲಿ 68 ರನ್ ಹೊಡೆದರೆ ಇದರಲ್ಲಿ 8 ಫೋರ್ ಮತ್ತೆ 2 ಸಿಕ್ಸ್ ಒಳಗೊಂಡಿತ್ತು ಇವರಿಗೆ ಜೊತೆಯಾದ ಸುಂದೀಪ್ ಜೋರ ಅವರು 39 ಬಾಲ್ ಅಲ್ಲಿ 63 ರನ್ ಹೊಡೆದರು. ಇದರಲ್ಲಿ 5 ಸಿಕ್ಸ್ ಮತ್ತೆ 3 ಫೋರ್ ಒಳಗೊಂಡಿತ್ತು.
174 ರನ್ ಗುರಿಯನ್ನು ಬೆನ್ನುಹತ್ತಿ ಹೊರಟ ವೆಸ್ಟ್ ಇಂಡೀಸ್ ತಂಡ ನೇಪಾಳ್ ತಂಡದ ಸ್ಪಿನ್ ದಾಳಿಗೆ ತತ್ತರಿಸಿ 83 ರನ್ ಗಳಿಗೆ ಆಲೌಟ್ ಆಗಿ ಆಟ ಮುಗಿಸಿತು . ನೇಪಾಳ್ ತಂಡದ ಬೌಲರ್ ಮೊಹಮ್ಮದ್ ಆದಿಲ್ ಆಲಮ್ 4 ಓವರ್ ಬೌಲಿಂಗ್ ಮಾಡಿ 24 ರನ್ ಕೊಟ್ಟು 4 ವಿಕೆಟ್ ತೆಗೆದರೆ ಕುಶಾಲ್ ಬರ್ಥೆಲ್ ಅವರು 2.1 ಓವರ್ ಬೌಲಿಂಗ್ ಮಾಡಿ 16 ರನ್ ಕೊಟ್ಟು 3 ವಿಕೆಟ್ ತೆಗೆದರು . ಇವರು ಒಂದು ಓವರ್ ಅಲ್ಲಿ ರನ್ ಬಿಟ್ಟು ಕೊಡದೆ ಬೌಲಿಂಗ್ ಮಾಡಿದ್ದು ಇನ್ನೊಂದು ವಿಶೇಷವಾಗಿತ್ತು ಇವರಿಗೆ ಜೊತೆಯಾದ ದೀಪಕ್ ಸಿಂಗ್ ಐರೀ ಅವರ ಬೌಲಿಂಗ್ ಗೆ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮ್ಯಾನ್ ಗಳು ರನ್ ಮಾಡಲು ಒದ್ದಾಡಿದರು ದೀಪಕ್ ಸಿಂಗ್ ಐರೀ ಅವರು ತಾವು ಮಾಡಿದ 3 ಓವರ್ ಅಲ್ಲಿ 4 ರನ್ ಕೊಟ್ಟು ಒಂದು ವಿಕೆಟ್ ಪಡೆದರು.