3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳೆಯರು ನೀಡಿದ 412/10 ಬೃಹತ್ ಮೊತ್ತವನ್ನು ಬೆನ್ನುಹತ್ತಿದ ಭಾರತ ಮಹಿಳೆಯರ ತಂಡ ಸ್ಮೃತಿ ಮಂದನಾ , ನಾಯಕಿ ಹರ್ಮನ್ಪ್ರೀತ್ ಕೌರ್ , ದೀಪ್ತಿ ಶರ್ಮಾ ಅವರ ಹೋರಾಟದ ಹೊರತಾಗಿಯೂ 43 ರನ್ ಗಳ ಚಿಕ್ಕ ಅಂತರದಲ್ಲಿ ಸೋತು ಸರಣಿ ಆಸ್ಟ್ರೇಲಿಯಾಗೆ ಬಿಟ್ಟು ಕೊಟ್ಟಿತ್ತು .ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ ಮಹಿಳೆಯರ ತಂಡ ಆರಂಭದಿಂದಲೇ ಆಕ್ರಮಕವಾಗಿ ಆಡಲು ಆರಂಭಿಸಿತ್ತು ಮೊದಲ 4.2 ಓವರ್ ನಲ್ಲಿ 43/1 ಕಳೆದುಕೊಂಡರೆ ಆಲಿಸ್ಸಾ ಹೀಲಿ 18 ಬಾಲ್ 30 ರನ್ ಮಾಡಿ ಮೊದಲು ವಿಕೆಟ್ ಕೊಟ್ಟರೆ ನಂತರ ಜಾರ್ಜಿಯಾ ವಾಲ್ ಗೆ ಜೊತೆಯಾದ ಎಲ್ಲಿಸ್ ಪೆರ್ರಿ 107 ರನ್ಗಳ ಜೊತೆಯಾಟ ಮಾಡಿದರು. ಇವರ ನಂತರ ಬಂದ ಬೆತ್ ಮೂನಿ 75 ಬಾಲ್ ಅಲ್ಲಿ 138 ರನ್ ಮಾಡಿ 44 ಓವರ್ ಅಲ್ಲಿ ಆಸ್ಟ್ರೇಲಿಯ ತಂಡದ ಸ್ಕೋರ್ ಅನ್ನು 370 ರ ಗಡಿ ದಾಟಿಸಿದರು . ಅವರ ನಂತರ ಬಂದವರು ಅಷ್ಟೇನು ದೊಡ್ಡ ಆಟ ಆಡಿಲ್ಲ ಅಂದರೂ ತಂಡದ ಸ್ಕೋರ್ ಅನ್ನು 400 ಗಡಿ ದಾಟಿಸುವಲ್ಲಿ ಸಫಲರದರು.ಇದಕ್ಕೆ ಉತ್ತರವಾಗಿ ಭಾರತ ಮಹಿಳೆಯರ ತಂಡ ಓಪನರ್ ಆಗಿ ಬಂದ ಪ್ರತೀಕ ರಾವಲ್ ಅವರು 12 ಬಾಲ್ ಅಲ್ಲಿ 10 ರನ್ ಮಾಡಿ ಔಟ್ ಆದ್ರೆ ನಂತರ ಬಂದ ಹರ್ಲೀನ್ ಡಿಯೋಲ್ 14 ಬಾಲ್ ಅಲ್ಲಿ 11 ರನ್ ಮಾಡಿ ಔಟ್ ಆದರು ಆದರೆ ಒಂದು ಕಡೆಯಲ್ಲಿ ನಿಂತ ಸ್ಮೃತಿ ಮಂದಾನ 63 ಬಾಲ್ ಅಲ್ಲಿ 125 ಸ್ಕೋರ್ ಮಾಡಿದರೆ ಅವರಿಗೆ ಜೊತೆಯಾದ ನಾಯಕಿ ಹರ್ಮನ್ಪ್ರೀತ್ ಕೌರ್ 35 ಬಾಲ್ ಅಲ್ಲಿ 52 ರನ್ ಮಾಡಿ ಭಾರತ ತಂಡದ ಮೊತ್ತವನ್ನು 20 ಓವರ್ ಅಲ್ಲಿ 206 ರನ್ ಗೆ ತಂದು ಇನ್ನೇನೂ 30 ಓವರ್ ಗಳಲ್ಲಿ ಅಂದರೆ 180 ಬಾಲ್ ಅಲ್ಲಿ 207 ರನ್ ಬೇಕಿರೋದು ಇನ್ನೇನು ನಾವು ಮಾಡೇ ಬಿಡ್ತೇವೆ ಅನ್ನುವಾಗ ಕಾಲಿನ ನೋವಿಗೆ ಸಿಲುಕಿದ ಹರ್ಮನ್ಪ್ರೀತ್ ಕೌರ್ ಅದರ ನಂತರದ ಬಾಲ್ ಅಲ್ಲಿ ವಿಕೆಟ್ ಒಪ್ಪಿಸಿದರು. ಅದರ ಬೆನ್ನಲ್ಲೇ ಸ್ಮೃತಿ ಮಂದನಾ ಅವರು ತಮ್ಮ ವಿಕೆಟ್ ಕೈಚೆಲ್ಲಿದರು . ನಂತರ ಬಂದ ದೀಪ್ತಿ ಶರ್ಮಾ ಒಂದು ಕಡೆ ಚೆನ್ನಾಗಿ ಆಡುತ್ತಿದ್ದರೆ ಅವರಿಗೆ ಜೊತೆಯಾದ ರಿಚ್ಚಾ ಘೋಷ್ ದೀಪ್ತಿ ಶರ್ಮಾ ಅವರ ಹೊಡೆತ ಬೌಲರ್ ನ ಕೈ ಗೆ ತಾಗಿ ರನೌಟ್ ಆದರು . ರಿಚ್ಚಾ ಘೋಷ್ ಅವರ ವಿಕೆಟ್ ಇಲ್ಲಿ ತುಂಬಾ ಮುಖ್ಯವಾಗಿದ್ದು ಇದು ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿಗೆ ದಾರಿಯಾಯಿತು. ಆದರೂ ಹಠ ಬಿಡದ ದೀಪ್ತಿ ಶರ್ಮಾ 58 ಬಾಲ್ ಅಲ್ಲಿ 72 ರನ್ ಮಾಡಿ ಒಪ್ಪಿಸಿದರು ಭಾರತ ಮಹಿಳೆಯರ ತಂಡವು 47 ಓವರ್ ಗಳಲ್ಲಿ 369 ರನ್ ಗೆ ತನ್ನ ಎಲ್ಲಾ ವಿಕೆಟ್ ಒಪ್ಪಿಸಿ 43 ರನ್ ಗಳಿಂದ ಸೋತು 3 ಏಕದಿನ ಪಂದ್ಯಗಳ ಸರಣಿಯಲ್ಲಿ 1-2 ರಿಂದ ಸೋತು ಸರಣಿಯನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿತ್ತು. Post navigation ಏಷ್ಯಾ ಕಪ್ ನಿಂದ ಹೊರಗೆ ಬಿದ್ದ ಆಫ್ಘಾನಿಸ್ತಾನ ವೆಸ್ಟ್ ಇಂಡೀಸ್ ಮುಂದೆ ಗೆದ್ದು ಇತಿಹಾಸ ನಿರ್ಮಿಸಿದ ನೇಪಾಳ