ಇಂದು ಶಾರ್ಜಾದಲ್ಲಿ ಆರಂಭವಾದ ನೇಪಾಳ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಟಿ20 ಪಂದ್ಯದಲ್ಲಿ ಮೊದಲ ಪಂದ್ಯವಾದ ಇಂದು ನೇಪಾಳ ವೆಸ್ಟ್ ಇಂಡೀಸ್ ಮುಂದೆ ಗೆದ್ದು ನಾವು ಯಾರಿಗೂ ಕಡಿಮೆ ಇಲ್ಲ ಅನ್ನೋದನ್ನ ತೋರಿಸಿದೆ . ಟಾಸ್ ಸೋತು ಬ್ಯಾಟಿಂಗ್ ಗೆ ಬಂದ ನೇಪಾಳ ತಂಡ 12 ರನ್ ಗೆ ತನ್ನ ಮೊದಲ ಎರಡು ವಿಕೆಟ್ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿ ಇರುವಾಗ ಜೊತೆಯಾದ ನಾಯಕ ರೋಹಿತ್ ಪೌಡೆಲ್ ಮತ್ತು ಕುಶಾಲ್ ಮಲ್ಲ 58 ರನ್ ಗಳ ಜೊತೆಯಾಟ ನಡೆಸಿ ಸುಭದ್ರ ಸ್ಥಿತಿಗೆ ತಂದು ನಿಲ್ಲಿಸುವಲ್ಲಿ ಸಫಲರಾದರೂ ಇವರ ಇಬ್ಬರ ವಿಕೆಟ್ ಅನ್ನು ವೆಸ್ಟ್ ಇಂಡೀಸ್ ತಂಡದ ನೂತನ ಆಟಗಾರ ನವೀನ್ ಬಿಡೈಸಿ ತಮ್ಮ ಮೊದಲ ಪಂದ್ಯದಲ್ಲೇ ಇಬ್ಬರ ವಿಕೆಟ್ ಅನ್ನು ತೆಗೆದು ತಾನು ಉತ್ತಮ ಆಲ್ ರೌಂಡರ್ ಅನ್ನೋದನ್ನ ನಿರೂಪಿಸಿದರು. ನಂತರ ಬಂದ ನೇಪಾಳ ಆಟಗಾರರು ಅಷ್ಟೇನು ದೊಡ್ಡ ಮಟ್ಟದ ಆಟವನ್ನು ಆಡಿಲ್ಲ ಅಂದರೂ ತಂಡದ ಮೊತ್ತವನ್ನು ಮೊದಲ ಇನ್ನಿಂಗ್ಸ್ ಮುಕ್ತಾಯದ ಹೊತ್ತಿಗೆ 148/8 ತಂದು ನಿಲ್ಲಿಸಿದ್ದರು. ವೆಸ್ಟ್ ಇಂಡೀಸ್ ಪರವಾಗಿ ಹೋಲ್ಡರ್ 4 ಓವರ್ ಅಲ್ಲಿ 20 ರನ್ ಬಿಟ್ಟು ಕೊಟ್ಟು 4 ವಿಕೆಟ್ ತೆಗೆದರೆ ಮೊದಲ ಪಂದ್ಯ ಆಡಿದ ನವೀನ್ ಬಿಡೈಸಿ 4 ಓವರ್ ಅಲ್ಲಿ 29 ರನ್ ಕೊಟ್ಟು 3 ವಿಕೆಟ್ ತೆಗೆದರೆ ನಾಯಕ ಅಕೆಯಲ್ ಹುಸೇನ್ 4 ಓವರ್ ಅಲ್ಲಿ 18 ರನ್ ಕೊಟ್ಟು 1 ವಿಕೆಟ್ ತೆಗೆದರು. ನಂತರ ಬ್ಯಾಟಿಂಗ್ ಮಾಡಲು ಬಂದ ವೆಸ್ಟ್ ಇಂಡೀಸ್ ತಂಡ ನೇಪಾಳ ತಂಡದ ಸ್ಪಿನ್ ಬೌಲಿಂಗ್ ಗೆ ತತ್ತರಿಸಿ 20 ಓವರ್ ಅಲ್ಲಿ 129/9 ಮಾಡಿ ನೇಪಾಳ ಮುಂದೆ ತಮ್ಮ ಸೋಲನ್ನು ಒಪ್ಪಿಕೊಂಡಿತು. ನಾಯಕ ರೋಹಿತ್ ಪೌಡೆಲ್ ಪಂದ್ಯ ಪುರುಷೋತ್ತಮ ಪ್ರಸ್ತುತಿಯನ್ನು ಪಡೆದರೆ ನೇಪಾಳ ತಂಡ ವೆಸ್ಟ್ ಇಂಡೀಸ್ ಮುಂದೆ ಗೆದ್ದು ತಮ್ಮ 180 ಪಂದ್ಯಗಳ ಇತಿಹಾಸದಲ್ಲಿ ಮೊದಲ ಪಂದ್ಯ ಫುಲ್ ಮೆಂಬರ್ ತಂಡದ ಮುಂದೆ ಗೆದ್ದ ಹಾಗೆ ಆಯಿತು. Post navigation ಆಸ್ಟ್ರೇಲಿಯಾ ಮಹಿಳೆಯರ ತಂಡದ ಮುಂದೆ ಹೋರಾಡಿ ಸೋತ ಭಾರತ ಮಹಿಳೆಯರ ತಂಡ ಮತ್ತೆ ನೇಪಾಳ್ ಮುಂದೆ ಹೀನಾಯವಾಗಿ ಸೋತ ವೆಸ್ಟ್ ಇಂಡೀಸ್ ತಂಡ