ಕೊನೆಯ ಓವರ್ ಅಲ್ಲಿ 5 ಸಿಕ್ಸ್ ಹೊಡೆದು ಮ್ಯಾಚ್ ಗತಿ ಬದಲಿಸಿದ ಮೊಹಮ್ಮದ್ ನಬಿ ಆದರೂ ಸೋತ ಆಫ್ಘಾನಿಸ್ತಾನ……..
ಏಷ್ಯಾ ಕಪ್ ಮ್ಯಾಚ್ ನಂಬರ್ 11 ರಲ್ಲಿ ಶ್ರೀಲಂಕಾ ಮತ್ತೆ ಆಫ್ಘಾನಿಸ್ತಾನ ನಡುವೆ ನಡೆಯುತ್ತಿರುವ ಮ್ಯಾಚ್ ನಲ್ಲಿ ಮೊದಲ 14 ಓವರ್ ಶ್ರೀಲಂಕಾ ತುಂಬಾ ಉತ್ತಮವಾಗಿ ಆಡಿ ಆಫ್ಘಾನಿಸ್ತಾನದ 6 ವಿಕೆಟ್ ತೆಗೆದು 90 ರನ್ನಿಗೆ ನಿಲ್ಲಿಸಿತ್ತು ಇನ್ನೇನು ಜಾಸ್ತಿ ಅಂದ್ರೆ 120 ರಿಂದ 140 ಸ್ಕೋರ್ ಗೆ ಮೊದಲ ಇನ್ನಿಂಗ್ಸ್ ಮುಗಿಯಬಹುದು ಅಂತ ಅನಿಸುತ್ತಿರುವಾಗಲೇ ಒಂದು ಒಳ್ಳೆಯ ಜೊತೆಯಾಟ ಮಾಡಿದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಂಡದ ಸ್ಕೋರ್ ಅನ್ನು ಮೆಲ್ಲ ಮೆಲ್ಲನೆ 17 ಓವರ್ ಗೆ 114/6 ತಂದು ನಿಲ್ಲಿಸಿದ್ದರು ಅದರ ಮುಂದಿನ ಓವರ್ ನ ಮೊದಲ ಎಸೆತದಲ್ಲಿ ರಶೀದ್ ಖಾನ್ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರು. ನಂತರ 10 ಬಾಲ್ ಅಲ್ಲಿ 14 ರನ್ ಮಾಡಿ ತಾಳ್ಮೆಯಿಂದ ಆಡುತ್ತಿದ್ದ ಮೊಹಮ್ಮದ್ ನಬಿ ಒಮ್ಮೆಲೇ ತಮ್ಮ ಉಗ್ರ ರೂಪಕ್ಕೆ ಬಂದು 18 ನೇ ಓವರ್ ಅಲ್ಲಿ 17 ರನ್ ಹೊಡೆದು ಟೀಮ್ ಸ್ಕೋರ್ ಅನ್ನು 137/7 ತಂದು ನಿಲ್ಲಿಸಿದರು. ಇನ್ನೂ ಕೊನೆಯ ಓವರ್ ಅಲ್ಲಿ ಬೌಲಿಂಗ್ ಮಾಡಲು ದುನಿತ್ ವೇಳಲಗೆ ಅವರಿಗೆ ಕೊಡಲಾಯಿತು ಅಷ್ಟರವರೆಗೆ ಅವರು ತಮ್ಮ 3 ಓವರ್ ಅಲ್ಲಿ 17 ರನ್ ಕೊಟ್ಟು ತಮ್ಮ ಉತ್ತಮ ಬೌಲಿಂಗನ್ನು ಪ್ರದರ್ಶಿಸಿದ್ದರು ಆದರೆ ಕೊನೆಯ ಓವರ್ ಅವರ ಎಲ್ಲಾ ಉತ್ತಮ ಬೌಲಿಂಗ್ ಅನ್ನು ಮೊಹಮ್ಮದ್ ನಬಿ 6 ಎಸೆತಗಳಲ್ಲಿ 5 ಸಿಕ್ಸ್ ಹೊಡೆದು 32 ರನ್ ಚಚ್ಚಿದರು ಇಲ್ಲಿಗೆ 130 ಗೆ ನಿಲ್ಲಬೇಕಿದ್ದ ಸ್ಕೋರ್ 169/8 ಗೆ ಬಂದು ನಿಂತಿತ್ತು .
ಎರಡನೇ ಇನ್ನಿಂಗ್ಸ್ ನಲ್ಲಿ ಕುಶಾಲ್ ಮೆಂಡಿಸ್ ಅವರ ಅರ್ಧ ಶತಕದಿಂದ ಸುಲಭದಲ್ಲಿ 170 ರನ್ ಗಳ ಟಾರ್ಗೆಟನ್ನು 18.4 ಬಾಲ್ ಗಳಲ್ಲಿ 171/4 ಮುಗಿಸಿ ಶ್ರೀಲಂಕಾ ಈ ಪಂದ್ಯದಲ್ಲಿ ಜಯ ಸಾಧಿಸಿತು. ಕುಶಾಲ್ ಮೆಂಡಿಸ್ ಅವರು 52 ಬಾಲ್ ಗಳಿಂದ 74 ರನ್ ಹೊಡೆದು ಕೊನೆಯವರೆಗೆ ಅಜೇಯರಾಗಿ ಉಳಿದರು . ಬೌಲಿಂಗ್ ಅಲ್ಲಿ ಮುಜೀಬ್ , ಒಮ್ರಜೈ , ನೂರ್ ಅಹ್ಮದ್, ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್ ಪಡೆದರು ರನ್ ನಿಯಂತ್ರಿಸಲು ಸಾಧ್ಯವಾಗಿಲ್ಲ . ನುವಾನ್ ತುಷಾರ ಬೌಲಿಂಗ್ ಅಲ್ಲಿ 4 ಓವರ್ ನಿಂದ 18 ರನ್ ಕೊಟ್ಟು 4 ವಿಕೆಟ್ ತೆಗೆದು ಅಫ್ಘಾನಿಸ್ತಾನದ ಸ್ಕೋರ್ ಅನ್ನು ನಿಯಂತ್ರಿಸುವಲ್ಲಿ ಸಫಲರಾಗಿದ್ದರು . ಕುಶಾಲ್ ಮೆಂಡಿಸ್ ಅವರ ಅಜೇಯ ಆಟ ಮತ್ತು ನುವಾನ್ ತುಷಾರ ಅವರ 4 ಓವರ್ ಅಫ್ಘಾನಿಸ್ತಾನವನ್ನು ಏಷ್ಯಾ ಕಪ್ ನಿಂದ ಹೊರಗೆ ಹಾಕಿತು ಅಂತ ಹೇಳಿದ್ರು ತಪ್ಪಾಗಲ್ಲಾ . ಅಫ್ಘಾನಿಸ್ತಾನದ ಪರವಾಗಿ ಮೊಹಮ್ಮದ್ ನಬಿ 22 ಬಾಲ್ ಗಳಲ್ಲಿ 60 ರನ್ ಹೊಡೆದರು ಇದರಲ್ಲಿ 6 ಸಿಕ್ಸ್ ಮತ್ತೆ 3 ಫೋರ್ ಗಳು ಒಳಗೊಂಡಿದ್ದವು.
ಈ ಪಂದ್ಯದ ಉತ್ತಮ ಆಟಗಾರರು .


ಮೊಹಮ್ಮದ್ ನಬಿ – 60(22) 1 wicket
ಕುಶಾಲ್ ಮೆಂಡಿಸ್ – 74(52)
ಕಮಿಂಡು ಮೆಂಡಿಸ್ – 26(13)
ನುವಾನ್ ತುಷಾರ – 4 wicket
ದಸುನ್ ಶನಕಾ – 1 wicket