ಜರ್ನಿ

Dhirubhai Ambani

ಒಂದು ಪುಟ್ಟ ಹಳ್ಳಿಯಿಂದ ಬಂದ ಹುಡುಗನ ಕನಸು ನಮ್ಮ ಭಾರತದಲ್ಲಿ, ಸಾಮಾನ್ಯ ಮನುಷ್ಯನೊಬ್ಬ ಕೂಡ ದೊಡ್ಡ ಕನಸು ಕಾಣಬಹುದು, ಮತ್ತೆ ಅದನ್ನ ನಿಜ ಮಾಡೋಬಹುದು ಅಂತ ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಅಂದ್ರೆ ಧೀರೂಭಾಯಿ ಅಂಬಾನಿ. ಅವರ ಕಥೆ ಬರೀ ಒಂದು ಕಂಪನಿಯ ಕಥೆ ಅಲ್ಲ, ಅದು ಲಕ್ಷಾಂತರ ಜನರಿಗೆ “ನಾವು ಕೂಡ ದೊಡ್ಡ ಕನಸು ಕಾಣಬಹುದು, ಅದಕ್ಕಾಗಿ ಕಷ್ಟ ಪಡಬಹುದು, ಮತ್ತೆ ಸಾಧಿಸಬಹುದು” ಅನ್ನೋ ಸ್ಫೂರ್ತಿ ಕೊಟ್ಟಿದೆ.

ಧೀರೂಭಾಯಿ ಅಂಬಾನಿ, ಪೂರ್ತಿ ಹೆಸರು ಧೀರಜ್ ಲಾಲ್ ಹೀರಾಚಂದ್ ಅಂಬಾನಿ. ಅವರು 1932ರ ಡಿಸೆಂಬರ್ 28ರಂದು ಗುಜರಾತ್ನ ಚೋರ್ವಾಡ್ ಅನ್ನೋ ಪುಟ್ಟ ಗ್ರಾಮದಲ್ಲಿ ಹುಟ್ಟಿದರು. ಅವರಪ್ಪ ಶಾಲಾ ಶಿಕ್ಷಕರಾಗಿದ್ರು. ಅವರ ಮನೆ ಅಷ್ಟೇನೂ ಶ್ರೀಮಂತಿಕೆ ಆಗಿರಲಿಲ್ಲ, ಸಾಧಾರಣವಾಗಿತ್ತು. ಮನೆಯಲ್ಲಿ ಅಣ್ಣ-ತಮ್ಮ, ಅಕ್ಕ-ತಂಗಿಯರು ಇದ್ರು. ಚಿಕ್ಕಂದಿನಿಂದಲೂ ಧೀರೂಭಾಯಿ ತುಂಬಾ ಚುರುಕಾಗಿದ್ರು, ಏನಾದ್ರೂ ಹೊಸದು ಮಾಡಬೇಕು ಅಂತ ಯೋಚಿಸ್ತಿದ್ರು. ಶಾಲೆ ಮುಗಿದ ತಕ್ಷಣ, ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ, ಓದು ಬಿಟ್ಟು ಏನಾದ್ರೂ ಕೆಲಸ ಮಾಡಬೇಕು ಅಂತ ಯೋಚಿಸಿದ್ರು. ಆಗ ಅವರಿಗೆ ಬರೀ 16 ವರ್ಷ.

ಯೆಮೆನ್ನಲ್ಲಿ ದುಡಿಮೆ ಮತ್ತು ಕಲಿಯುವಿಕೆ

16ನೇ ವಯಸ್ಸಿಗೆ ಅವರು ಕೆಲಸ ಹುಡುಕಿಕೊಂಡು ಯೆಮೆನ್ ದೇಶಕ್ಕೆ ಹೋದರು. ಅಲ್ಲಿ, ಮೊದಲು ಪೆಟ್ರೋಲ್ ಬಂಕ್ನಲ್ಲಿ ಎಣ್ಣೆ ಹಾಕೋ ಕೆಲಸ ಮಾಡ್ತಿದ್ರು. ಆಮೇಲೆ ಒಂದು ತೈಲ ಕಂಪನಿಯಲ್ಲಿ ಕ್ಲರ್ಕ್ ಆದ್ರು. ಆಗ ಅವರಿಗೆ ತಿಂಗಳಿಗೆ ಸಿಕ್ತಿರೋದು ಬರೀ 300 ರೂಪಾಯಿ ಸಂಬಳ. ಯೆಮೆನ್ನಲ್ಲಿ ಪ್ರತಿದಿನ ಜೀವನ ಮಾಡೋದೇ ಒಂದು ದೊಡ್ಡ ಸವಾಲಾಗಿತ್ತು. ಆದ್ರೂ, ಧೀರೂಭಾಯಿ ಅಲ್ಲಿ ಸುಮ್ಮನೆ ಕೂತಿರಲಿಲ್ಲ. ಅಲ್ಲಿನ ಮಾರ್ಕೆಟ್, ಬೇರೆ ದೇಶಗಳ ಜೊತೆ ನಡೆಯೋ ವ್ಯಾಪಾರ, ಹಣಕಾಸು ವ್ಯವಹಾರಗಳು – ಹೀಗೆ ಬ್ಯುಸಿನೆಸ್ ಬಗ್ಗೆ ತುಂಬಾ ವಿಷಯಗಳನ್ನ ಕಸ್ತರು. ಜನರ ಮಾತುಗಳನ್ನು ಕದ್ದು ಕದ್ದು ಕೇಳ್ತಿದ್ರು, ಮಾರುಕಟ್ಟೆಯ ನಾಡಿಮಿಡಿತ ಅರ್ಥ ಮಾಡ್ಕೊಂಡ್ರು. ಇದೆಲ್ಲಾ ಅವರಿಗೆ ಮುಂದೆ ದೊಡ್ಡ ಬ್ಯುಸಿನೆಸ್ ಮಾಡೋಕೆ ತುಂಬಾ ಹೆಲ್ಸ್ ಮಾಡ್ತು.

ಒಂದು ಇಂಟರೆಸ್ಟಿಂಗ್ ಕಥೆ ಇದೆ – ಯೆಮೆನ್ನಲ್ಲಿ ಬೆಳ್ಳಿ ನಾಣ್ಯಗಳನ್ನ ಕರಗಿಸಿ, ಬೆಳ್ಳಿ ತೆಗೆದು ಭಾರತಕ್ಕೆ ಕಳಿಸಿ, ಅಲ್ಲಿ ಮಾರಾಟ ಮಾಡೋಕೆ ಶುರು ಮಾಡಿದ್ರು. ಇದು ಸಣ್ಣ ಪ್ರಮಾಣದ ಬ್ಯುಸಿನೆಸ್ ಆಗಿದ್ರೂ, ಅದ್ರಲ್ಲಿ ಅವರು ದೊಡ್ಡ ಲಾಭ ಮಾಡಿದ್ರು. ಆ ವ್ಯಾಪಾರ ಸರ್ಕಾರಕ್ಕೆ ಗೊತ್ತಾಗಿ ನಿಂತುಹೋಯಿತು. ಆದ್ರೂ, ಧೀರೂಭಾಯಿ ಅವರಲ್ಲಿರೋ ‘ಹೇಗಾದ್ರೂ ಮಾಡಿ ಲಾಭ ಮಾಡಬೇಕು’ ಅನ್ನೋ ಬುದ್ದಿವಂತಿಕೆ ಮತ್ತೆ ಧೈರ್ಯವನ್ನ ಇದು ಚೆನ್ನಾಗಿ ತೋರಿಸ್ತು.

Young Dhirubhai Ambani

ಮುಂಬೈನಲ್ಲಿ ರಿಲಯನ್ಸ್ ಶುರು: ಕಷ್ಟಗಳ ನಡುವೆ ಕನಸು ಸುಮಾರು ಎಂಟು ವರ್ಷ ಯೆಮೆನ್ನಲ್ಲಿ ಕೆಲಸ ಮಾಡಿದ ಮೇಲೆ, ಧೀರೂಭಾಯಿ ಭಾರತಕ್ಕೆ ವಾಪಸ್ ಬಂದ್ರು. ಅವರ ಕೈಲಿದ್ದಿದ್ದು ಬರೀ 50,000 ರೂಪಾಯಿ ದುಡ್ಡು. ಅದನ್ನೇ ಬಂಡವಾಳ ಮಾಡ್ಕೊಂಡು, 1966ರಲ್ಲಿ ಮುಂಬೈನಲ್ಲಿ ‘ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಷನ್’ ಅಂತ ಒಂದು ಕಂಪನಿ ಶುರು ಮಾಡಿದ್ರು. ಇದು ಒಂದು ಚಿಕ್ಕ ಜವಳಿ (ಬಟ್ಟೆ) ವ್ಯಾಪಾರದ ಕಂಪನಿ. ಅವರಿಗೆ ದೊಡ್ಡ ಆಫೀಸ್ ಇರ್ಲಿಲ್ಲ, ಒಂದು ಸಣ್ಣ ರೂಮ್, ಒಬ್ಬ ಅಸಿಸ್ಟೆಂಟ್ ಜೊತೆ ಕೆಲಸ ಶುರು ಮಾಡಿದ್ರು. ಫೋನ್ ಕೂಡ ಇರ್ಲಿಲ್ಲ. “ಫೋನ್ಗೆ ದುಡ್ಡು ಎಲ್ಲಿಂದ ತರೋದು, ಬೀದಿ ಫೋನ್ ಯೂಸ್ ಮಾಡೋಣ” ಅಂತಿದ್ರಂತೆ. ಆ ದಿನಗಳಲ್ಲಿ ಧೀರೂಭಾಯಿ ತಲೆಗೆ ದೊಡ್ಡ ದೊಡ್ಡ ಕನಸುಗಳು ಇದ್ದು. ಆದರೆ ಯಾರೂ ಅವರ ಕನಸುಗಳಿಗೆ ಸಾಥ್ ಕೊಡೋಕೆ ಮುಂದೆ ಬರಲಿಲ್ಲ. ಅವರ ಮನೆ ಜನ, ಫ್ರೆಂಡ್ಸ್, ಎಲ್ಲರೂ ಇವರನ್ನ ನೋಡಿದಾಗ “ಈತ ಏನು ಮಾಡ್ತಾನೋ” ಅಂತ ಅಪಹಾಸ್ಯ ಮಾಡ್ತಿದ್ರು. ಆದ್ರೆ ಧೀರೂಭಾಯಿ ಅವರನ್ನ ತಡೆಯೋಕೆ ಯಾರಿಂದಲೂ ಆಗ್ಲಿಲ್ಲ.

“ದೊಡ್ಡ ಕನಸುಗಳನ್ನು ಕಾಣಿ, ಏಕೆಂದರೆ ದೊಡ್ಡ ಕನಸುಗಳು ಮಾತ್ರ ನಿಮ್ಮನ್ನು ದೊಡ್ಡ ಯಶಸ್ಸಿಗೆ ತಲುಪಿಸುತ್ತವೆ”

ವಿಮಲ್ನಿಂದಲೇ ಗುರುತು ಮತ್ತು ಸಾಮ್ರಾಜ್ಯದ ವಿಸ್ತರಣೆ ಅವರು ಪಾಲಿಯೆಸ್ಟರ್ ನೂಲು ಮಾರಾಟ ಶುರು ಮಾಡಿದ್ರು. ಈ ವ್ಯಾಪಾರದಲ್ಲಿ ತುಂಬಾ ಕಾಂಪಿಟಿಷನ್ ಇತ್ತು. ಆದ್ರೂ, ಧೀರೂಭಾಯಿ ಒಂದು ಮಾತು ಹೇಳ್ತಿದ್ರು: “ನಾನು ಬ್ಯುಸಿನೆಸ್ ಮಾಡೋಕೆ ಬಂದಿದ್ದೀನಿ, ಕಾಂಪಿಟಿಷನ್ ಕೊಡೋಕೆ ಅಲ್ಲ.” ಅಂದ್ರೆ, ಅವರು ಸ್ಪರ್ಧೆ ಬಗ್ಗೆ ತಲೆ ಕೆಡಿಸಿಕೊಳ್ಳದೆ, ತಮ್ಮ ಕೆಲಸದ ಮೇಲೆ ಗಮನ ಕೊಡ್ತಿದ್ರು. ನೂಲಿನ ಗುಣಮಟ್ಟ ಮತ್ತೆ ಕಡಿಮೆ ಬೆಲೆಗೆ ಸಿಗಬೇಕು ಅನ್ನೋದು ಅವರ ಮುಖ್ಯ ಗುರಿಯಾಗಿತ್ತು.

ಆಮೇಲೆ, ಅವರ “ವಿಮಲ್” ಬಟ್ಟೆಗಳು ಭಾರತದಲ್ಲಿ ತುಂಬಾ ಫೇಮಸ್ ಆದವು. ವಿಮಲ್ ಅಂದ್ರೆ ಕ್ವಾಲಿಟಿ, ಫ್ಯಾಷನ್ ಮತ್ತೆ ಒಳ್ಳೆ ಬೆಲೆ ಅಂತ ಜನರ ಮನಸ್ಸಲ್ಲಿ ಫಿಕ್ಸ್ ಆಯ್ತು. ಇಡೀ ದೇಶದಲ್ಲಿ ವಿಮಲ್ ಬಗ್ಗೆ ಗೊತ್ತಿತ್ತು. ಧೀರೂಭಾಯಿ ಬರೀ ಜವಳಿ ಬ್ಯುಸಿನೆಸ್ ಮಾಡಿ ನಿಲ್ಲಲಿಲ್ಲ. ಅವರು ತಮ್ಮ ಕನಸುಗಳನ್ನು ಇನ್ನೂ ದೊಡ್ಡದು ಮಾಡ್ಕೊಂಡ್ರು. ಜವಳಿಯಿಂದ ರಾಸಾಯನಿಕ, ಅದರಿಂದ ಪೆಟ್ರೋಕೆಮಿಕಲ್ಸ್, ಆಮೇಲೆ ಪವರ್, ಟೆಲಿಕಮ್ಯೂನಿಕೇಷನ್, ಇಂಧನ, ಚಿಲ್ಲರೆ ವ್ಯಾಪಾರ (ರಿಟೇಲ್) – ಹೀಗೆ ಒಂದರ ಹಿಂದೊಂದರಂತೆ ಅನೇಕ ಕ್ಷೇತ್ರಗಳಿಗೆ ಕಾಲಿಟ್ಟರು. ಪ್ರತಿ ಕ್ಷೇತ್ರದಲ್ಲೂ ದೊಡ್ಡ ದೊಡ್ಡ ಕಂಪನಿಗಳ ಜೊತೆ ಸ್ಪರ್ಧೆ ಇತ್ತು.

Dhirubhai Ambani's achievements

ಜನರ ವಿಶ್ವಾಸ ಮತ್ತು ದೊಡ್ಡ ಯೋಚನೆ ಆಗಿನ ಕಾಲದಲ್ಲಿ, ಸಾಮಾನ್ಯ ಜನರಿಗೆ ಸ್ಟಾಕ್ ಮಾರ್ಕೆಟ್, ಶೇರುಗಳ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಆದ್ರೆ ಧೀರೂಭಾಯಿ ಅವರು “ರಿಲಯನ್ಸ್ ಕಂಪನಿಯಲ್ಲಿ ನೀವೂ ಪಾಲುದಾರರಾಗಬಹುದು” ಅಂತ ಜನರಿಗೆ ಹೇಳಿದ್ರು. ಅವರ ಕಂಪನಿಯ ಶೇರುಗಳನ್ನ ಸಾಮಾನ್ಯ ಜನರಿಗೂ ಮಾರಾಟ ಮಾಡಿದ್ರು. ಅವು ಒಂದು ಮಾತು ಹೇಳ್ತಿದ್ರು “ನನ್ನ ಕಂಪನಿಯ ಶೇರುದಾರರು ಯಾವಾಗಲೂ ನಗ್ತಿರಬೇಕು” ಅಂತ. ಮತ್ತೆ ರಿಲಯನ್ಸ್ ಶೇರುಗಳು ಯಾವತ್ತೂ ಲಾಸ್ ಆಗಿಲ್ಲ, ಯಾವಾಗಲೂ ಬೆಲೆ ಏರಿದೆ. ಇದರಿಂದ ಲಕ್ಷಾಂತರ ಭಾರತೀಯರು ಮೊದಲ ಬಾರಿಗೆ ಸ್ಟಾಕ್ ಮಾರ್ಕೆಟ್ನಲ್ಲಿ ದುಡ್ಡು ಹಾಕಿದ್ರು ಮತ್ತೆ ಲಾಭ ಮಾಡಿದ್ರು. ಇದು ಅವರ ಮೇಲೆ ಜನರಿಗೆ ಇದ್ದ ನಂಬಿಕೆಯನ್ನು ಹೆಚ್ಚಿಸಿತು.

ಪೆಟ್ರೋಕೆಮಿಕಲ್ಸ್ ಅಂದ್ರೆ ರಾಸಾಯನಿಕಗಳು, ಪ್ಲಾಸ್ಟಿಕ್ ತಯಾರು ಮಾಡುವ ಬ್ಯುಸಿನೆಸ್. ಇದು ತುಂಬಾನೇ ಟೆಕ್ನಿಕಲ್ ಮತ್ತೆ ದೊಡ್ಡ ಬಂಡವಾಳ ಬೇಕಾಗುವ ಕ್ಷೇತ್ರ. ಆಗಿನ ಕಾಲದಲ್ಲಿ ಈ ಬ್ಯುಸಿನೆಸ್ ದೊಡ್ಡ ದೊಡ್ಡ ಸರ್ಕಾರಿ ಕಂಪನಿಗಳ ಹತ್ರ ಇತ್ತು. ಧೀರೂಭಾಯಿ ಈ ಕ್ಷೇತ್ರಕ್ಕೆ ಬರ್ತೀನಿ ಅಂದಾಗ, ಅನೇಕರು ನಕ್ಕಿದ್ರು. “ಇದು ಇವರಿಂದ ಆಗೋ ಕೆಲಸ ಅಲ್ಲ” ಅಂದ್ರು. ಆದ್ರೆ, ಧೀರೂಭಾಯಿ ಅವರ ಛಲ ಎಷ್ಟಿತ್ತಂದ್ರೆ, ಅವರು ಏನೇ ಅಡ್ಡಿ ಆತಂಕಗಳು ಬಂದರೂ ಅದನ್ನ ಎದುರಿಸಿ, ಭಾರತದಲ್ಲೇ ವಿಶ್ವ ದರ್ಜೆಯ ಪೆಟ್ರೋಕೆಮಿಕಲ್ಸ್ ಫ್ಯಾಕ್ಟರಿಗಳನ್ನು ಕಟ್ಟಿದ್ರು. “ನಾನು ಯಾವಾಗಲೂ ದೊಡ್ಡದಾಗಿ ಯೋಚಿಸುತ್ತೇನೆ” ಅನ್ನೋದು ಅವರ ಮುಖ್ಯ ತತ್ವಗಳಲ್ಲಿ ಒಂದಾಗಿತ್ತು. ಇವತ್ತು ರಿಲಯನ್ಸ್ ನಮ್ಮ ದೇಶದ ಅತಿದೊಡ್ಡ ಕಂಪನಿಗಳಲ್ಲಿ ಒಂದು.

ಧೀರೂಭಾಯಿ ಬಿಟ್ಟು ಹೋದ ದೊಡ್ಡ ಪಾಠ ಧೀರೂಭಾಯಿ ಅಂಬಾನಿ 2002ರ ಜುಲೈ 6ರಂದು ನಮ್ಮನ್ನ ಬಿಟ್ಟು ಹೋದ್ರು. ಆದ್ರೆ ಅವರು ಕಟ್ಟಿದ ಸಾಮ್ರಾಜ್ಯ, ಅವರು ಬಿಟ್ಟುಹೋದ ದಾರಿ, ಅವರು ಹೇಳಿಕೊಟ್ಟ ಪಾಠ – ಅದೆಲ್ಲಾ ನಮ್ಮ ದೇಶಕ್ಕೆ ದೊಡ್ಡ ಬಳುವಳಿ. ಅವರ ಜೀವನ ಕಥೆ ನಮಗೆಲ್ಲಾ ಒಂದು ದೊಡ್ಡ ಪಾಠ. “ಕನಸು ಬರೀ ದೊಡ್ಡದಾಗಿ ಕಂಡ್ರೆ ಸಾಲದು, ಆ ಕನಸುಗಳನ್ನ ನಿಜ ಮಾಡೋಕೆ ಏನೇ ಕಷ್ಟ ಬಂದರೂ ಅದನ್ನ ಎದುರಿಸೋ ಧೈರ್ಯ ಇರಬೇಕು, ಮತ್ತೆ ಕೆಲಸ ಮಾಡೋ ಛಲ ಇರಬೇಕು” ಅಂತ ಅವರ ಜೀವನವೇ ನಮಗೆಲ್ಲಾ ತೋರಿಸಿಕೊಟ್ಟಿದೆ. ಅವರು ಬರೀ ಒಂದು ದೊಡ್ಡ ಕಂಪನಿ ಕಟ್ಟಲಿಲ್ಲ, ಬದಲಿಗೆ ಲಕ್ಷಾಂತರ ಸಾಮಾನ್ಯ ಭಾರತೀಯರಲ್ಲಿ ಕನಸುಗಳನ್ನ ಕಟ್ಟುವ, ಮತ್ತೆ ಅವುಗಳನ್ನ ನನಸಾಗಿಸುವ ಹುಮ್ಮಸ್ಸು ತುಂಬಿದ್ರು. ಅವರ ಕಥೆ ಇವತ್ತಿಗೂ ಅನೇಕರಿಗೆ ಸ್ಪೂರ್ತಿ. ಧೀರೂಭಾಯಿ ಅಂಬಾನಿ ಅವರ ಮಾತು:”ದೊಡ್ಡ ಕನಸುಗಳನ್ನು ಕಾಣಿ, ಏಕೆಂದರೆ ದೊಡ್ಡ ಕನಸುಗಳು ಮಾತ್ರ ನಿಮ್ಮನ್ನು ದೊಡ್ಡ ಯಶಸ್ಸಿಗೆ ತಲುಪಿಸುತ್ತವೆ.”